ಮನೆ ಮುಂದೆ ಕ್ಲೀನ್ ಮಾಡುತ್ತಿದ್ದ ಮಹಿಳೆಯನ್ನು ಎಳೆದು ಲೈಂಗಿಕ ಕಿರುಕುಳ ನೀಡಿದ ಯುವಕ ಅರೆಸ್ಟ್



ಬೆಂಗಳೂರು : ಮನೆ ಮುಂದೆ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ 35 ವರ್ಷದ ಮಹಿಳೆಯ ಮೇಲೆ 18 ವರ್ಷದ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಜ.14ರಂದು ಹಲಸೂರಿನಲ್ಲಿ ನಡೆದಿದೆ.

ಹಲಸೂರಿನ ಮಿಲ್ಕ್‌ ಮ್ಯಾನ್‌ ಸ್ಟ್ರೀಟ್‌ ನಿವಾಸಿ ರಾಕೇಶ್‌ (18) ಇಂತಹ ಕೃತ್ಯ ಎಸಗಿದ ಆರೋಪಿಯಾಗಿದ್ದು, ಮಹಿಳೆಯೊಬ್ಬಳು  ಮನೆ ಮುಂದೆ ಮಧ್ಯಾಹ್ನ 1 ಗಂಟೆ ವೇಳೆಗೆ ಕ್ಲೀನಿಂಗ್ ಕೆಲಸ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಆರೋಪಿ ರಾಕೇಶ್‌, ಮಹಿಳೆಯನ್ನು ಹಿಡಿದುಕೊಂಡು ಎಳೆದಾಡಿ ಕಿರುಕುಳ ನೀಡಿದ್ದಾನೆ. ಆ ವೇಳೆ ಮಹಿಳೆ ಗಟ್ಟಿಯಾಗಿ ಕಿರುಚಿಕೊಂಡಿದ್ದಕ್ಕೆ ಮಹಿಳೆಯನ್ನು ನೆಲಕ್ಕೆ ತಳ್ಳಿ ಓಡಿ ಹೋಗಲು ಯತ್ನಿಸಿದ್ದಾನೆ.



ಆಗ ಸ್ಥಳೀಯರು ಆರೋಪಿಯನ್ನು ಹಿಡಿದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

Post a Comment

Previous Post Next Post