ಬೆಂಗಳೂರು: ಕೊರೊನಾ ನಿರ್ಬಂಧಿತ ವಲಯಗಳಲ್ಲಿ ವಾಸವಿದ್ದು, ಕಚೇರಿಗೆ ಬರಲು ಸಾಧ್ಯವಾಗದ ಮತ್ತು ಸೋಂಕಿಗೆ ಒಳಗಾಗಿ ಸ್ವಯಂ ಕ್ವಾರಂಟೈನ್‌ಗೆ ಒಳಪಟ್ಟಿರುವ ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಸಂಬಂಧ ಸರ್ಕಾರಕ್ಕೆ ಮನವಿ ಮಾಡಿ ವಿಶೇಷ ಸಾಂದರ್ಭಿಕ ರಜೆ ನೀಡುವಂತೆ ಕೋರಿಕೆ ಸಲ್ಲಿಸಿತ್ತು. ಈ ಕೋರಿಕೆಗೆ ಮನ್ನಣೆ ನೀಡಿರುವ ಸರ್ಕಾರ, ಕರ್ನಾಟಕ ಸಿವಿಲ್ ಸೇವೆಗಳ ನಿಯಮಾವಳಿಗೆ ತಿದ್ದುಪಡಿ ಮಾಡಿದೆ.
ರಾಜ್ಯ ಸರ್ಕಾರಿ ನೌಕರರು ಕಂಟೈನ್‌ಮೆಂಟ್ ವಲಯದಲ್ಲಿ ವಾಸವಿದ್ದು, ಕಚೇರಿಗೆ ಬರಲು ಸಾಧ್ಯವಾಗದೇ ಇದ್ದರೆ ಅಂತಹವರಿಗೆ ಏಳು ದಿನಗಳವರೆಗೆ ವಿಶೇಷ ಸಾಂದರ್ಭಿಕ ರಜೆ ನೀಡಬಹುದು. ಒಂದು ವೇಳೆ ಸೋಂಕಿನಿಂದ ಕ್ವಾರಂಟೈನ್‌ಗೆ ಒಳಗಾದರೆ, 14 ದಿನಗಳ ಸಾಂದರ್ಭಿಕ ರಜೆ ಪಡೆಯಬಹುದು ಎಂದು ನಿಯಮಾವಳಿಯಲ್ಲಿ ಸೂಚಿಸಲಾಗಿದೆ.
e news kannada
Tags:
Kannada News
